Home

Book-Summary - ಶಕುನ ಪಕ್ಷಿ, ಆರಿದ ಲಾಂದ್ರ, ತಾಳೆ ಹೂವು

ಇದು ನಾನು ಓದುತ್ತಿರುವ ಟಿ. ಕೆ. ರಾಮಾ ರಾವು ಅವರ ಮೊದಲ ಪುಸ್ತಕ. ಇದರಲ್ಲಿ ಮೂರು ಸಣ್ಣ ಪತ್ತೆದಾರಿ ಕಥೆಗಳಿವೆ. ಪ್ರತಿಯೊಂದೂ ವಿಭಿನ್ನವಾಗಿದೆ. ಕಥೆಗಳು ಪ್ರಾರಂಭದಲ್ಲಿ ನಿಧಾನವಾಗಿ ಸಾಗಿದರೂ ತುಂಬ ಬೇಗನೆ ರೋಚಕವಾಗುತ್ತ ಹೋಗುತ್ತವೆ. ಎಂಬತ್ತು-ತೊಂಬತ್ತರ ದಶಕದಲ್ಲಿ ನಡೆಯುವಂತ ಸನ್ನಿವೇಶ ಇದೆ. ಕಥೆಗಳಲ್ಲಿನ ಹಲವು ಪಾತ್ರಗಳಲ್ಲಿ ಯಾರು ಕೊಲೆಗಾರರೆಂದು ಊಹಿಸಲು ನನ್ನಿಂದ ಸಾಧ್ಯವಾಗಲಿಲ್ಲ. ನನಗೆ ಅನಿಸಿದ್ದು, ಈ ಕಥೆಗಳನ್ನು ಇನ್ನು ದೊಡ್ಡದಾಗಿ ಮಾಡಿ ಇನ್ನೂ ಹಲವಾರು ವಿಷಯಗಳ ವಿವರಣೆಗಳನ್ನು ನೀಡಬಹುದಿತ್ತು. ಪ್ರತಿ ಕಥೆಯ ಮುಖ್ಯ ಪಾತ್ರವು ಸಾಮಾನ್ಯ ವ್ಯಕ್ತಿಯಂತಿದೆ. ಒಂದು ಆಸೆ, ರಾಮಾ ರಾವು ಅವರ ಈ ಪತ್ತೆದಾರಿ ಕಥೆಗಳನ್ನು ಮತ್ತು ಗಣೇಶಯ್ಯರವರ ಪತ್ತೆದಾರಿ ಕಥೆಗಳನ್ನು ಕನ್ನಡ web series/youtube series ಆಗಿ ಮಾಡಿದರೆ ಎಷ್ಟು ಚೆನ್ನಾಗಿರುತ್ತಿತ್ತು. ಟಿ.ಕೆ. ರಾಮಾ ರಾವುರವರ ಮತ್ತಷ್ಟು ಕಥೆಗಳನ್ನು ಓದಬೇಕು.